ಮಹೀಂದ್ರಾ 275 DI XP ಪ್ಲಸ್ ಟ್ರ್ಯಾಕ್ಟರ್ ಏಕೆ ಖರೀದಿಸಬೇಕು: ಮೈಲೇಜ್, ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
ಭಾರತೀಯ ಟ್ರ್ಯಾಕ್ಟರ್ ಮಾರುಕಟ್ಟೆಯು ವಿಶಿಷ್ಟವಾಗಿದೆ - ರೈತರು ಕೈಗೆಟುಕುವ ಬೆಲೆಯಲ್ಲಿ ಶಕ್ತಿಯುತ, ಜೊತೆಗೆ ತಮ್ಮ ಎಲ್ಲ ಅಗತ್ಯಗಳನ್ನು ಪೂರೈಸುವ ಸವ್ಯಸಾಚಿ ಟ್ರ್ಯಾಕ್ಟರ್ಗಾಗಿ ಹುಡುಕುತ್ತಾರೆ. ಮಹೀಂದ್ರಾ 275 DI XP ಪ್ಲಸ್ - ದೃಢವಾದ ಕವಚ, ಶಕ್ತಿಯುತ ಎಂಜಿನ್, ಹೆಚ್ಚು ಇಂಧನ ಕ್ಷಮತೆ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, ಭಾರತೀಯ ರೈತರ ಬೇಡಿಕೆಗಳನ್ನು ಪೂರೈಸುವ ಅಂತಹ ಒಂದು ಟ್ರ್ಯಾಕ್ಟರ್ ಆಗಿದೆ. ಮಹೀಂದ್ರಾದ ಈ ಟ್ರ್ಯಾಕ್ಟರ್ ಬಗ್ಗೆ ಇನ್ನಷ್ಟು ವಿಷಯ ಇಲ್ಲಿದೆ.
ಮಹೀಂದ್ರಾ 275 DI XP ಪ್ಲಸ್ ಟ್ರ್ಯಾಕ್ಟರ್: ಅವಲೋಕನ
ಮಹೀಂದ್ರಾ 275 DI XP ಪ್ಲಸ್ ತನ್ನ ವಿಭಾಗದಲ್ಲಿ ಅತ್ಯಂತ ಕಡಿಮೆ ಇಂಧನ ಬಳಸಿ ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು ELS ಡೀಸೆಲ್ ಎಂಜಿನ್ ಹೊಂದಿದ್ದು, ಸ್ವಲ್ಪವೂ ಶ್ರಮವಿಲ್ಲದೆ ಎಲ್ಲ ರೀತಿಯ ಉಪಕರಣಗಳು ಮತ್ತು ಕೃಷಿ ಕಾರ್ಯಾಚರಣೆಗಳನ್ನು ನಿರ್ವಹಿಸಲು ಅಗತ್ಯವಿರುವಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ.
ಅಲ್ಲದೆ, ಅತ್ಯಂತ ಸವಾಲಿನ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಒರಟಾದ ಹೊರಾವರಣವನ್ನು ಇದು ಹೊಂದಿದೆ. ನೀವು ಈ ಮಹೀಂದ್ರಾ ಟ್ರ್ಯಾಕ್ಟರ್ ಅನ್ನು ಹಿಮಾಲಯದ ಬೆಟ್ಟಗಳಲ್ಲಿ ಅಥವಾ ಮಹಾರಾಷ್ಟ್ರದ ಭತ್ತದ ಗದ್ದೆಯಲ್ಲಿ ಬಳಸುತ್ತಿರಲಿ - ಹವಾಮಾನ ಅಥವಾ ಮಣ್ಣಿನ ಪರಿಸ್ಥಿತಿಗಳಿಂದಾಗಿ ಟ್ರ್ಯಾಕ್ಟರ್ ಹಾಳಾಗುವ ಕುರಿತು ಚಿಂತಿಸಬೇಕಿಲ್ಲ.
ಇದು ಹೈಟೆಕ್ ಹೈಡ್ರಾಲಿಕ್ಗಳನ್ನು ಹೊಂದಿದ್ದು, ಟ್ರ್ಯಾಕ್ಟರ್ ಅನ್ನು ಓವರ್ ಲೋಡ್ ಮಾಡದೆ ಅಥವಾ ಸಿಮೆಂಟ್ ಚೀಲಗಳನ್ನು ಟ್ರ್ಯಾಕ್ಟರ್ನ ಮುಂಭಾಗದಲ್ಲಿ ಲೋಡ್ ಮಾಡುವ ಅಗತ್ಯವಿಲ್ಲದೆ ಭಾರೀ ಉಪಕರಣಗಳು ಮತ್ತು ಸಾಗಣೆಯನ್ನು ನಿರ್ವಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಕೆಟ್ಟು ನಿಲ್ಲುವಿಕೆಗಳು ಅಥವಾ ದುಬಾರಿ ರಿಪೇರಿಗಳ ಬಗ್ಗೆ ಚಿಂತಿಸದೆ ನೀವು ಟ್ರ್ಯಾಕ್ಟರ್ ಅನ್ನು ಅದರ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಉದ್ಯಮದಲ್ಲೇ ಮೊದಲ ಬಾರಿಗೆ 6-ವರ್ಷಗಳ ವಾರಂಟಿಯನ್ನು ನಾವು ನೀಡುತ್ತೇವೆ. ಮಹೀಂದ್ರಾ 275 DI XP ಪ್ಲಸ್: ಮೈಲೇಜ್
ಮಹೀಂದ್ರ 275 DI XP ಪ್ಲಸ್: ಮೈಲೇಜ್
ಮಹೀಂದ್ರಾ 275 DI XP ಪ್ಲಸ್ ಅತ್ಯುತ್ತಮ-ದರ್ಜೆಯ ಇಂಧನ ಮಿತವ್ಯಯವನ್ನು ನೀಡುತ್ತದೆ, ಆದರೆ ಅದನ್ನು ಹೇಗೆ ಸಾಧ್ಯವಾಗಿಸುತ್ತದೆ? ಅದರ ಎಂಜಿನ್ ವಿನ್ಯಾಸ, ಟ್ಯೂನ್ ಮತ್ತು ಪ್ರಸರಣದ ಕಾರಣದಿಂದಾಗಿ ಇದು ಸಾಧ್ಯವಾಗಿದೆ.
ಡೀಸೆಲ್ ಎಂಜಿನ್ ದೀರ್ಘ-ಸ್ಟ್ರೋಕ್ ಹೊಂದಿದೆ, ಆದ್ದರಿಂದ ಪ್ರತಿ ಸ್ಟ್ರೋಕ್ ಸಮಯದಲ್ಲಿ ಪಿಸ್ಟನ್ ಪ್ರಮಾಣಿತ-ಸ್ಟ್ರೋಕ್ ಎಂಜಿನ್ಗಳಿಗಿಂತ ಹೆಚ್ಚು ದೂರ ಚಲಿಸುತ್ತದೆ, ಕಡಿಮೆ RPM ಗಳಲ್ಲಿ ಹೆಚ್ಚಿನ ಟಾರ್ಕ್ ಉತ್ಪಾದಿಸುತ್ತದೆ. ಮುಂದೆ, ಕಡಿಮೆ ಪ್ರಮಾಣದ ಇಂಧನವನ್ನು ಬಳಸಿಕೊಂಡು ದಹನ ಪ್ರಕ್ರಿಯೆಯನ್ನು ಕಿಡಿ ಹೊತ್ತಿಸಲು ದಹನಕ್ಕಾಗಿ ಗಾಳಿ-ಇಂಧನ ಮಿಶ್ರಣವು ಅತ್ಯುತ್ತಮವಾಗಿರುವಂತೆ ಇದನ್ನು ಟ್ಯೂನ್ ಮಾಡಲಾಗಿದೆ.
ಎಂಜಿನ್ ಅನ್ನು ಮುಂದೆ ಭಾಗಶಃ ಸ್ಥಿರ ಜಾಲರಿಯ ಪ್ರಸರಣಕ್ಕೆ ಜೋಡಿಸಲಾಗುತ್ತದೆ, ಅದು ಎಂಜಿನ್ನಿಂದ ಚಕ್ರಗಳಿಗೆ ರವಾನೆಯಾಗುವ ಶಕ್ತಿಯ ನಷ್ಟವನ್ನು ಕಡಿಮೆ ಮಾಡುತ್ತದೆ. ಎಂಜಿನ್ನಿಂದ ಉತ್ಪತ್ತಿಯಾಗುವ ಶಕ್ತಿಯು ಗಣನೀಯವಾದ ಯಾವುದೇ ನಷ್ಟವಿಲ್ಲದೆ ಚಕ್ರಗಳನ್ನು ತಲುಪುವುದನ್ನು ಇದು ಖಚಿತಪಡಿಸುತ್ತದೆ, ಈ ಮೂಲಕ ಕಡಿಮೆ ವೇಗದಲ್ಲಿಯೂ ಎಂಜಿನ್ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.